Sunday, January 9, 2011

IPL season....3kaasina aatagaararu!!!

           ನಮ್ಮ ದೇಶ ಶುರು ಮಾಡಿದ ಐ ಪಿ ಎಲ್ ಕ್ರಿಕೆಟ್ ಇಂದು ಮಗ್ಗುಲು ಮಲಗಲು ತಿಳಿಯದ ಮಗುವೂ ಸಹ ಉಚ್ಚೆ ಹೊಯ್ಯಲು ಮರೆತು ಕ್ರಿಕೆಟ್ ಆಟ ವನ್ನು ನೋಡುವಂತೆ ಮಾಡುತ್ತಿದೆ.ಇದು ತಪ್ಪಲ್ಲ.ಆದರೆ ೨ ದಿನಗಳ ಹಿಂದೆ ನಡೆದ 'ಹರಾಜಿ'ನಲ್ಲಿ  'ಹರಾಜಾ'ಗಾದೆ  ತಮ್ಮ "ಮಾನ ಹರಾಜು" ಮಾಡಿಕೊಂಡಿರುವ ಆಟಗಾರರ ಬಗ್ಗೆ ಅನುಕಂಪದ ನಡುವೆಯೂ ಫ್ರಾಂಚೈಸಿ ಗಳ ವಿರುದ್ಧ ಸಿಟ್ಟು ಬರುತ್ತಿದೆ.  
           IPL  AUCTION -೪ ನಲ್ಲಿ ಹರಾಜಾಗದೆ ಉಳಿದಿರುವ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಸೌರವ್ ಗಂಗೂಲಿ,ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ವೊಂದರಲ್ಲಿ ಇಂದಿನವರೆಗೆ ಅಳಿಸಲಾಗದ ದಾಖಲೆಯಾಗಿ ಉಳಿದಿರುವ  ೪೦೦ ರನ್ ಗಳಿಸಿರುವ ಎಡಚ ಬ್ರಿಯಾನ್ ಲಾರಾ,ತಲೆಗೆ ಮುಂಡಾಸು ಕಟ್ಟಿ ಅದರ ಮೇಲೆ ಹೆಲ್ಮೆಟ್ ಇಟ್ಟು ಆಡುವ ಸಿಡಿಲಬ್ಬರದ ದಾಂಡಿಗ ಕ್ರಿಸ್ ಗೈಲ್ ಮುಂತಾದ ತಾರಾ ಆಟಗಾರರು ಹರಾಜಾಗದೆ ಇರುವುದರ ಬಗ್ಗೆ ಪ್ರತಿಯೋರ್ವ ಕ್ರಿಕೆಟ್ ಅಭಿಮಾನಿಯೂ ಸಹ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾನೆ.ಇದು ತಾರಾ ಕ್ರಿಕೆಟ್ ಆಟಗಾರರಿಗೆ ನಾದುವ ಅವಮಾನವಲ್ಲದೆ ಮತ್ತೇನು?
          ನಿಜವಾಗಿಯೂ ದೇಶದ ಹಿತದೃಷ್ಟಿಯಿಂದ ನೋಡುವುದಿದ್ದರೆ ಈ ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆ,I P L ಗಳೆಲ್ಲಾ ಅಗತ್ಯವಿತ್ತೆ?ಅದೆಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೆ,ಉಡಲು ವಸ್ತ್ರವಿಲ್ಲದೆ ವಾಸಿಸಲು ವಸತಿಯಿಲ್ಲದೆ ಅಲೆಮಾರಿಗಳಂತೆ ಅಲೆದಾಡುತ್ತಿದ್ದಾರೆ.ಆದ್ರೆ ಬೆಂಗಳೂರಲ್ಲಿ 3ಕಾಸಿಗೆ ಆಟಗಾರರ ಹರಾಜು! ಇದೆಲ್ಲಾ ಅಗತ್ಯವಿತ್ತೇ?

3 comments:

  1. ಓಡುವ ಕುದುರೆಗೆ ಹಣ ಕಟ್ಟುತ್ತಾರೆ, ಬೇಕಾದಷ್ಟು ತಿನ್ನಿಸುತ್ತಾರೆ. ಒಮ್ಮೆ ಸೋತರೆ ಆದರೆ ಹಳೆಯ ಪ್ರತಾಪವನ್ನು ಯಾರೂ ನೋಡುವುದಿಲ್ಲ. ಅದನ್ನು ಬಂಡಿ ಎಳೆಯಲು ಉಪಯೋಗಿಸುತ್ತಾರೆ.

    ReplyDelete
  2. ಅಪ್ಪಚ್ಚಿ...ಆದರೆ ಕ್ರಿಕೆಟ್ ಆತಗಾರರ ಸಾಮರ್ಥ್ಯವ ಹಾಂಗೆ ಅಳವಲೆ ಎಡಿಯ ಅಲ್ದಾ?ಉದಾಹರಣೆ ಬೇಕಾರೆ ಕೇಳಿ.ಕೊಡ್ತೆ.

    ReplyDelete
  3. ipl 4 haraju paradasharkavagi agide.

    ReplyDelete