Wednesday, January 12, 2011

ಹುಚ್ಚುನಾಯಿಗಳು......

                 ನಮ್ಮ ಇಂದಿನ ವಿಧಾನಸಭೆಯ ಕಲಾಪ ನೋಡಿದ ಬಹುತೇಕ ಮಂದಿ ಇನ್ನು ಮುಂದೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ಚಪ್ಪಲಿಯೇಟು ಕೊಟ್ಟಾರು ಎನ್ನುವ ಆಶಾ ಭಾವನೆ ನನ್ನದು.ಏಕೆಂದರೆ ನಮ್ಮಿಂದ ಚುನಾಯಿತಗೊಂಡ ಓರ್ವ ವಿಪಕ್ಷ ಸದಸ್ಯ ದಾಸಯ್ಯನಂತೆ ಜಾಗಟೆ ಹೆಟ್ಟುತ್ತಾ  ದಾಸಯ್ಯನಿಗೆ ಅವಮಾನ ಮಾಡಲು ಹೊರಟಿದ್ದಾನೆ.ಇವನಿಗೆ ಗೌರವ ತೆಗೆದುಕೊಳ್ಳುವ ಯೋಗ್ಯತೆವಿಲ್ಲವಾದ್ದರಿಂದ ಆತನಿಗೆ ಏಕ ವಚನವೇ ಸೂಕ್ತ. ಇನ್ನು ವಿಪಕ್ಷ ಸದಸ್ಯರು ಆಡಳಿತ ಪಕ್ಷಕ್ಕೆ ಏನೂ ಮಾತನಾಡಲು ಅವಕಾಶ ನೀಡದೆ ವಿಧಾನಸಭೆಯ ಬಾವಿ ಗಿಳಿದು ಪ್ರತಿಭಟನೆ ನಡೆಸಿದರು.ಬಹುಷಃ ,ವಿಧಾನಸಭೆಯ ಬಾವಿಯ ಬದಲು ಬೇರೆ ಯಾವುದಾದರೂ ಬಾವಿ ನೋಡಿಕೊಳ್ಳುತ್ತಿದ್ದರೆ ರಾಜಕೀಯಕ್ಕೆ ಬರಬೇಕೆನ್ದುಕೊಂಡಿದ್ದ ಯುವಕರಿಗೆ ಸ್ಥಾನ ಸಿಗುತ್ತಿತ್ತು.
                    ಇಂತಹ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ ಎನ್ನಲು ನನಗೆ ನಾಚಿಕೆಯಾಗುತ್ತಿದೆ.ಬಹುಷಃ ನಿಮಗೂ ಆಗಬಹುದು.ಇಂತಹ ರಾಜಕಾರಣಿಗಳು ನಮಗೆ ಬೇಕಾ?ಅಟಲ್ ಬಿಹಾರಿ ವಾಜಪೇಯಿ ,ನರೇಂದ್ರ ಮೋದಿ ಯಂತಹ ಅದೆಷ್ಟೋ ಧೀಮಂತ ನಾಯಕರುಗಳು ಆಳಿದ್ದ ಆಳುತ್ತಿರುವ ದೇಶ ನಮ್ಮದು.ವಿಷಯ ಇಂತಿರಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆ ಡಿ ಎಸ್ ನಂತಹ ಹುಚ್ಚುನಾಯಿ ರಾಜಕಾರಣಿಗಳು ಆಡಳಿತ ಪಕ್ಷಕ್ಕೆ ಅವಕಾಶ ನೀಡುತ್ತಿಲ್ಲ..ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನಮ್ಮ ಕೆಲಸ.ಉಳಿದ "ಹುಚ್ಚುನಾಯಿ"ಗಳನ್ನು ಹಿಡಿದು ಬೋನಿಗೆ ಹಾಕುವುದು ನಮ್ಮ ನಿಮ್ಮೆಲ್ಲರ ಕೆಲಸ.ಏನಂತೀರಿ?

1 comment:

  1. ಬಿಜೆಪಿಯನ್ನು ಅತಿ ದೊಡ್ಡ ಪಕ್ಷವಾಗಿ ಚುನಾಯಿಸಿದರೆ ಸಾಕು. ಉಳಿದ ಕೆಲಸಗಳನ್ನು(ಸಂಖ್ಯಾಬಲ ಹೆಚ್ಚಿಸಲು ಮತ್ತು ರಾಜ್ಯ ಲೂಟಿ ಮಾಡಲು) ಮಾಡಲು ಅಲ್ಲಿ ಎಕ್ಸ್‌ಪರ್ಟ್ ಜನರಿದ್ದಾರೆ.

    ReplyDelete