Wednesday, January 19, 2011

ಕುಡುಕರ ಸಾಮ್ರಾಜ್ಯದಲ್ಲಿ ..


      ಇಂದು ನಮ್ಮ ದೇಶಕ್ಕೆ ಅರ್ಧಕ್ಕಿ೦ತಲೂ ಹೆಚ್ಚಿನ ತೆರಿಗೆ ಆದಾಯ ಅಬಕಾರಿ ಇಲಾಖೆಯ ಮೂಲಕ ಸಂದಾಯವಾಗುತ್ತಿದೆ ಒಟ್ಟಿಗೆ ಇಲಾಖೆಯ ಅಧಿಕಾರಿಗಳ ಮೇಜಿನ ಡ್ರವರ್ ಸಹ ಭರ್ತಿಯಾಗಿ ಸಮಳುತ್ತಿದೆ.ಆದರೆ ಈ ಸಾರಾಯಿಯ ಸಹವಾಸ ಮಾಡಿದ ಹಲವರು ತಮ್ಮ ಮನೆಯ ದಿಕ್ಕನ್ನು ಮರೆತು ರೋಡಿನಲ್ಲಿ,ರಸ್ತೆ ಬದಿಯ ಚರಂಡಿಯಲ್ಲಿ ಇನ್ನೆಲ್ಲೆಲ್ಲೋ ಬಿದ್ದು ಹೊರಲಾದಿಕೊಂಡಿರುತ್ತಾರೆ. ಹೆಂಡತಿ ,ಮಕ್ಕಳು ತಮ್ಮ ಗಂಡ ,ತಂದೆಯನ್ನು ಹುಡುಕಿಕೊಂಡು ಹೊರಡುತ್ತಾರೆ.ಇವರಿಂದ ನಮ್ಮ ದೇಶ ಉದ್ದಾರವಾಗುತ್ತಿದೆ ಎನ್ನಬಹುದೇ?
    ಕುಲ ಗೆಟ್ಟ ರಾಜಕಾರಣಿಗಳ ಪ್ರಮುಖ ಆದಾಯವು ಸಹ ಇದರಿಂದಲೇ.ಆದ್ದರಿಂದ ಇವರಿಂದ ನಾವು ಏನನ್ನೂ ನಿರೀಕ್ಷಿಸಲಾಗದು.ಏಕೆಂದರೆ ಅವರೂ ತಮ್ಮ ಕುಟುಂಬದ ಹತ್ತು ತಲೆಮಾರಿಗಾಗುವಷ್ಟು ಅಕ್ರಮ ಸಂಪಾದನೆಯನ್ನು ಮಾಡುತ್ತಾರೆಯೇ ಹೊರತು ಬೇರೇನೂ ಮಾಡುವುದಿಲ್ಲ.
     ಆದರೆ ನಮ್ಮ ನಾರಿಯರು ಸಹ "ನಾವು ಸಹ ಪುರುಷರಷ್ಟೇ ಸಮರ್ಥರು" ಎಂಬುದನ್ನು ಕುಡಿಯುವುದರ ಮೂಲಕವೂ ನಿರೂಪಿಸಲು ಹೊರಟಿರುವುದು ಆಘಾತಕಾರಿ ವಿಚಾರ.ಏಕೆಂದರೆ ಯಶಸ್ವೀ ಪುರುಷನ ಹಿಂದೆ ಮಹಿಳೆಯ ಕೈ ಇರುತ್ತದೆ ಎಂಬ ಮಾತಿಗೆ ಇಂದು ಅರ್ಥ ವಿಲ್ಲದಂತಾಗಿದೆ.ಆದರೆ ನಿಜವಾದ ವಿಚಾರವೇ ಬೇರೆ.ಓರ್ವ ಯಶಸ್ವಿಯಾಗಿರುವ ಪುರುಷನ ಹಿಂದೆ ಮಹಿಳೆ ಹೋಗುತ್ತಾಳೆ,ಇರಲಿ.ಅದು ಬೇರೆ ವಿಚಾರ.
     ಒಟ್ಟಿನಲ್ಲಿ ಇಂದಿನ ಯುವಜನತೆ ಕುಡಿದು ಹಾದಿ ತಪ್ಪುತ್ತಿದ್ದಾರೆ.ಸಂಸ್ಕೃತಿಯ ಬಗ್ಗೆ ಜಗತ್ತಿಗೆ ದಾರಿದೀಪವಾಗಿರುವ ಭವ್ಯ ಸಂಸ್ಕೃತಿಯ ಪರಂಪರೆ ಹೊಂದಿರುವ ನಮ್ಮ ದೇಶದ ಸಂಸ್ಕೃತಿಯ ಅಳಿವು-ಉಳಿವು ಇಂದಿನ ಯುವಜನಾಂಗದ ಮೇಲೆ ಅವಲಂಬಿತವಾಗಿದೆ.
ಕವಿವಾಣಿಯಂತೆ,
 ಕಟ್ಟುವೆವು ನಾವು ಹೊಸ ನಾಡೊಂದನು
 ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಶುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ಹೊಸ ನಾಡೊಂದನು
ಸುಖದ  ಬೀಡೊಂದನು.
ಈ ಕವಿವಾಣಿಗೆ ನಾವೆಲ್ಲ ಕಂಕಣ ಬದ್ದರಾಗೋಣ.ನೀವೆಲ್ಲ ಏನಂತೀರಿ?
                                                                                                           


  ಚಿತ್ರ ಕೃಪೆ,ಕೆಮರಾ:ಅದ್ನಾನ್
   ಸಹಾಯ:ಅಜೇಯ
               ಅನೀಶ್


No comments:

Post a Comment