Saturday, January 8, 2011

"ರಾಜಕೀಯ 'ಸನ್ಯಾಸ'"....

ರೆಡ್ಡಿಗಳ ಅಕ್ರಮ ಗಣಿಗಾರಿಕೆ ವಿರುದ್ಧವಾಗಿ ಸುಪ್ರೀಂಕೋರ್ಟ್ ನೇಮಿಸಿರುವ ಸಿ ಇ ಸಿ ಸಮಿತಿಯ ವರದಿಯೇನೋ ಸ್ವಾಗತಾರ್ಹ ವಿಚಾರ.ಆದರೆ ಪ್ರತಿಪಕ್ಷಗಳ ನಾಯಕರ ಉವಾಚ ಮಾತ್ರ ಅತ್ಯಂತ ಹಾಸ್ಯಾಸ್ಪದವಾಗಿದೆ.ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರ ಪ್ರಕಾರ ಅವರು ನಡೆಸಿದ "ಪಾದಯಾತ್ರೆ"ಯ ಫಲವಾಗಿ ಸಮಿತಿಯು ರೆಡ್ಡಿಗಳ ಅಕ್ರಮ ಗಣಿಗಾರಿಕೆ ವಿರುದ್ಧ ವರದಿ ನೀಡಿದೆ.ಆದ್ದರಿಂದ ಆಡಳಿತ ಪಕ್ಷದ ನಾಯಕರೆಲ್ಲರೂ ರಾಜಿನಾಮೆ ನೀಡಬೇಕು ಎಂದಿದ್ದಾರೆ.
ಓ....ಸಿದ್ಧರಾಮಯ್ಯನವರೇ,
               ದಯವಿಟ್ಟು ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬರುವವರೆಗೆ ಕಾದು ನೋಡಿ.ಬಳಿಕ ತೀರ್ಪು ನಿಮ್ಮ ಪರವಾಗಿದ್ದರೆ ಇನ್ನೊಮ್ಮೆ ರಾಜ್ಯಾದ್ಯಂತ "ಪಾದಯಾತ್ರೆ" ಮಾಡಿ.ಅಲ್ಲಿವರೆಗೆ ಸರಕಾರ ಮಾಡುವ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಿ,ಎಡವಿದಲ್ಲಿ ತಿಳಿಹೇಳಿ ಜನರ ಮನ ಗೆಲ್ಲಲು ಪ್ರಯತ್ನಿಸಿ.ಇದೂ ಸಾಧ್ಯವಾಗದಿದ್ದರೆ ನೀವೂ ಸಹಿತವಾಗಿ ಮಣ್ಣಿನ ಮುದ್ದೆ ದೇವೇಗೌಡ,ಮರದಿಂದ ಮರಕ್ಕೆ ಹಾರುವ ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಹಾರಿದ ಬಂಗಾರಪ್ಪ,ಆಡಳಿತ ದ ಅವಧಿ ಮುಗಿದ ಮೇಲೆ ಜನತೆ ತಿರಸ್ಕರಿಸಿದರೆ ಯಡಿಯೂರಪ್ಪ ಎಲ್ಲರೂ "ರಾಜಕೀಯ 'ಸನ್ಯಾಸ'" ತೆಗೆದುಕೊಂಡು ಮನೆಯಲ್ಲಿ ಕುಳಿತು ರಾಮಜಪ ಮಾಡಿ.ಯುವಕರಿಗೆ ರಾಜಕೀಯದಲ್ಲಿ ಅವಕಾಶಿ ನೀಡಿ.

2 comments:

  1. ಖಂಡಿತವಾಗ್ಲೂ ನಿಜ. ಮಾತು ಎತ್ತಿದರೆ ರಾಜೀನಾಮೆ ಕೊಡಿ ಅಂತಾರೆ. ಒಂದು ಎಲೆಕ್ಷನ್ ಗೆಲ್ಲೋ ಯೋಗ್ಯತೆ ಇಲ್ಲ ಇವರಿಗೆ. ರಾಜೀನಾಮೆ ಕೊಟ್ರೆ ನೀವ್ ಮಾಡೋ ಕೆಲಸ ಏನ್ ಸ್ವಾಮೀ ? ಮತ್ತೆ ಇದೆ ತಾನೇ ? ಇವರೆಲ್ಲ ಒಂದೇ ......

    ReplyDelete
  2. ಖಂಡಿತ ಬಾವ.ಬುದ್ಧಿ ಬರ್ಲಿಕ್ಕೆ ಇಲ್ಲ ಈ ದಗಲ್ಬಾಜಿ ರಾಜಕಾರಣಿಗಳಿಗೆ.

    ReplyDelete