Monday, March 14, 2011

ವಿಟ್ಲವನ್ನು ವಿಠಲನೇ ಕಾಯಬೇಕಷ್ಟೆ

ಮೊದಲಿಗೇ ಹೇಳ್ತೇನೆ..ನಾನು ಯಾವುದೇ ಪಕ್ಷದ ಪರವೂ ಅಲ್ಲ;ವಿರೋಧಿಯೂ ಅಲ್ಲ.
೨೦೦೫ ರಿಂದ ಪ್ರಾರಂಭಗೊಂಡ ವಿಟ್ಲ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಇದುವರೆಗೆ ಪೂರ್ಣವಿರಾಮ ದೊರೆತಿಲ್ಲ.
ದಕ್ಷ ಜಿಲ್ಲಾಧಿಕಾರಿಯೆಂದು ಖ್ಯಾತಿಗೊಂಡ ಪೊನ್ನುರಾಜ್ ಸುಮಾರು ೩ ಕ್ಕೂ ಅಧಿಕ ಬಾರಿ ವಿಟ್ಲಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡದ ಕೆಲವು "ದೊ(ದ)ಡ್ಡ" ಮನುಷ್ಯರ ಜೊತೆ ಮಾತನಾಡಿದರು.ಆ ಭೇಟಿಯೆಂದರೆ ಎಮ್ಮೆ ಚರ್ಮಕ್ಕೆ ಪೆಟ್ಟು ಬಿದ್ದಂತೆ.ರಸ್ತೆ ಅಗಲೀಕರಣ ಪ್ರಕ್ರಿಯೆ ಮಿಸುಕಾಡಲೇ ಇಲ್ಲ.ಇದನ್ನರಿತ ಕುತಂತ್ರಿಗಳು ಪೊನ್ನುರಾಜ್ ಅವರನ್ನು ಎತ್ತಂಗಡಿ ಮಾಡಿಸಿದರು.ಬಳಿಕ ಬಂದ ಸುಬೋಧ್ ಯಾದವ್ ಒಮ್ಮೆ ವಿಟ್ಲಕ್ಕೆ ಭೇಟಿ ನೀಡಿದರೂ ರಸ್ತೆ ಅಗಲೀಕರಣ ಪ್ರಕ್ರಿಯೆ ಮಾತ್ರ ಶೂನ್ಯವಾಗಿಯೇ ಉಳಿದಿದೆ.
ಈ ನಡುವೆ ಕೆಲವು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಮುಂಭಾಗ ಕೆಡವಿ ರಸ್ತೆ ಅಗಲೀಕರಣಕ್ಕೆ ತಮ್ಮ ಕೊಡುಗೆಯನ್ನು ನೀಡಿದರು.ಆದರೆ ಇದರಿಂದಾಗಿ ವಿಟ್ಲದ ಸಂಚಾರ ವ್ಯವಸ್ಥೆ ಮತ್ತಷ್ಟು ಹದೆಗೆಟ್ಟು ಹೋಯಿತೇ ವಿನಹ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ..
ವಿಟ್ಲಕ್ಕೆ ಐತಿಹಾಸಿಕವಾದ ಸ್ಥಾನವಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯತ್ ವ್ಯವಸ್ಥೆ ಹೊಂದಿದೆ.ಗ್ರಾಮ "ಶುದ್ಧ"ವಾಗಿರದಿದ್ದರೂ ರಾಷ್ಟ್ರಪತಿಗಳ ಕೈಯಿಂದ "ಶುದ್ಧ ಗ್ರಾಮಪಂಚಾಯತ್ " ಪ್ರಶಸ್ತಿ ಗಳಿಸಿದೆ.ಇಂತಿಪ್ಪ ವಿಟ್ಲದ ಕುಲಗೆಟ್ಟು ಹೋದ ರಸ್ತೆಗಳಿಗೆ ಮೋಕ್ಷವೆಂದು?